Song Name:ಸಿಂಗಾರ ಸಿರಿಯೇ
Movie:ಕಾಂತಾರ
Singers:ವಿಜಯ್ ಪ್ರಕಾಶ್, ಅನನ್ಯ ಭಟ್, ನಾಗರಾಜ್ ಪನಾರ್ ವಾಲ್ತೂರ್
Lyrics:ಪ್ರಮೋದ್ ಮರವಂತೆ
Music:ಬಿ.ಅಜನೀಶ್ ಲೋಕನಾಥ್

Singara Siriye Song Lyrics Kannada

ಭತ್ತ ತೊಳು ಕೈಗೆ
ಬಯಣಿ ಮುಳ್ಳ್ ಹೆಟ್ಟಿತ್
ಮದಿಗ್ ಹೋದ ಅಣ್ಣ ಬರಲಿಲ್ಲ
ಮದಿಗ್ ಹೋದ ಅಣ್ಣ ಬರಲಿಲ್ಲ…ಬಸರೂರ
ಹೂವ ಕಂಡನ್ನ ತಗದೀರ್

ಸಿಂಗಾರ ಸಿರಿಯೆ
ಅಂಗಾಲಿನಲೆ ಬಂಗಾರ ಅಗೆವ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸೊ ಛಾಯೆ

ಮಂದಹಾಸ ನಲುಮೆಯಾ ಶ್ರಾವಣ ಮಾಸಾ

ಮುದ್ದಾದ ಮಾಯಾಂಗಿ
ಮೌನದ ಸಾರಂಗಿ
ಮೋಹಕ ಮದರಂಗಿ

ಕನ್ನ ಹಾಕಿದೆ ಮುಂಗುರುಳ ಸೋಕಿ

ನಾಗರ ಬಲ್ಯಡಿ ನಾಗನ ದರುಶಿನ
ಇಡೀನಿ ನಾರಿಯರೆ ಬನಕ್ ಹೂಗ್
ಇಡೀನಿ ನಾರಿಯರೆ ಬನಕ್ ಹೂಗ್…ಬನದ್ ಒಡತಿ
ಬೇಡಿದ್ ವರವನ್ನೆ ಕೊಡುವಳು……

ಮಾತಾಡುವ ಮಂದಾರವೆ
ಕಂಗೊಳಿಸಬೇಡ ಹೇಳದೆ

ನಾನೇತಕೆ ನಿನಗ್ ಹೇಳಲಿ
ನಿನ್ನ ಮೈಯ ‌ತುಂಬಾ ಕಣ್ಣಿದೆ

ಮನದಾಳದ ರಸಮಂಜರಿ
ರಂಗೇರಿ ನಿನ್ನ ಕಾದಿದೆ

ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿಯಾಗಿದೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….

ಕಣ್ಣಿಗೆ ಕಾಣೊ ಹೂವುಗಳೆಲ್ಲ
ಏನೊ ಕೇಳುತಿದೆ
ನಿನ್ನಯ ನೆರಳ ಮೇಲೆಯೆ ನೂರು
ಚಾಡಿ ಹೇಳುತಿದೆ

ಸಿಂಗಾರ ಸಿರಿಯೆ
ಅಂಗಾಲಿನಲೆ ಬಂಗಾರ ಅಗೆವ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸೊ ಛಾಯೆ

ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ

ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ‌ ಮಾಡುವೆ

ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ‌ ಹಾಕಿದೆ

ನಾ ಕಾಣುವ ಕನಸಲ್ಲಿಯೆ
ನೀನ್ಯಾಕೆ ಬೇಲಿ ಹಾರುವೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….

ಸುಂದರವಾದ ಸೋಜಿಗವೆಲ್ಲ
ಕಣ್ಣ ಮುಂದೆ ಇದೆ
ಬಣ್ಣಿಸ ಬಂದ ರೂಪಕವೆಲ್ಲ
ತಾನೆ ಸೋಲುತಿದೆ

ಮಂದಹಾಸ ನಲುಮೆಯ ಶ್ರಾವಣ ಮಾಸ

Singara Siriye Song Lyrics Video – Kantara

Related: Singara Siriye Song Lyrics in English